stat Counter



Thursday, March 24, 2011

Article

ತುಳುವರ ಆಚರಣೆಗಳಲ್ಲಿ ಕಲಾವಂತಿಕೆ
                            -ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ
                                   
          ಪ್ರಾದೇಶಿಕ ಕಲೆಗಳ ಆಧುನಿಕ ಸೂಕ್ಷ್ಮ ಅಧ್ಯಯನದ ಉದ್ದೇಶದಿಂದ ಕನರ್ಾಟಕ ಲಲಿತಕಲಾ ಅಕಾಡೆಮಿ ಈ ಪುಸ್ತಕವನ್ನು ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು, 'ಕನ್ನಡಾಂತರ್ಗತಂ ತುಳುನಾಡು ನನ್ನದಿದು' (ಕಯ್ಯಾರ) ಎಂದು ನಂಬಿದವರು. ಈ ಜಿಲ್ಲೆಯ ರಂಗಪ್ರಭೇದಗಳು, ಧಾಮರ್ಿಕ ಆಚರಣೆಗಳು, ಕಂಠಸ್ಥ ಸಂಪ್ರದಾಯಗಳು, ಜನಪದ ಕುಣಿತ, ವಿನೋದ, ಕ್ರೀಡೆಗಳು, ಸಾಮಾಜಿಕ ಸಂಸ್ಥೆ, ಸಂಪ್ರದಾಯಗಳು, ಭಾಷೆ-ಉಪಭಾಷೆಗಳು ಕರಾವಳಿಯ ಪ್ರಾದೇಶಿಕ ಬಣ್ಣವಿರುವ ವಿಶಿಷ್ಟ ಪ್ರತ್ಯೇಕ ಸಂಸಕ್ಕೃತಿಯೊಂದನ್ನು ಪ್ರತಿನಿಧಿಸುತ್ತವೆ. ಈ ಜಿಲ್ಲೆಯ ಹೆಚ್ಚಿನ ಜನರು ಐದು ಪ್ರಧಾನ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಮಾತೃಭಾಷೆಯವರು.
          ಈ ಗ್ರಂಥದಲ್ಲಿ, ತುಳುವರ ಆಚರಣೆಗಳಲ್ಲಿ ಅಲಂಕರಣ (ಅಮೃತ ಸೋಮೇಶ್ವರ), ತುಳುವರ ಸಿರಿಜಾತ್ರೆ (ಮುಕುಂದ ಪ್ರಭು, ಮಂಜೇಶ್ವರ), ನಾಗಮಂಡಲ, ಡೆಕ್ಕೆಬಲಿ (ಎ. ವಿ. ನಾವಡ), ಭೂತಾರಾಧನೆಯಲ್ಲಿ ಅಲಂಕರಣ-1 (ಡಾ| ಕೆ. ಚಿನ್ನಪ್ಪ ಗೌಡ), ಭೂತಾರಾಧನೆಯಲ್ಲಿ ಅಲಂಕರಣ-2 (ಲೀಲಾ ಭಟ್), ದಕ್ಷಿಣ ಕನ್ನಡ ಜಿಲ್ಲೆಯ ಮೆಕ್ಕಿಕಟ್ಟೆಯ ಉರುಗಳು (ಡಾ| ಪುರುಷೋತ್ತಮ ಬಿಳಿಮಲೆ), ದಕ್ಷಿಣ ಕನ್ನಡ ಜಿಲ್ಲೆಯ ಮುಖವಾಡಗಳು ಮತ್ತು ಗೊಂಬೆಯಾಟ (ಎಸ್. ಎ. ಕೃಷ್ಣಯ್ಯ), ದಕ್ಷಿಣ ಕನ್ನಡ ಜಿಲ್ಲೆಯ ಭಿತ್ತಿ ಚಿತ್ರಗಳು (ಅ. ಲ. ನರಸಿಂಹನ್), ಒಂದು ಆರಾಧನಾ ವಿಶೇಷ-ವಿಷ್ಣುಮೂತರ್ಿ ದೈವ (ಕೆ. ಎಂ. ರಾಘವ ನಂಬಿಯಾರ್), ದಕ್ಷಿಣ ಕನ್ನಡ ಜಿಲ್ಲೆಯ ಆಚರಣೆಗಳು (ಕೆ. ವೆಂ. ರಾಜಗೋಪಾಲ), ಎಂಬ ಹನ್ನೊಂದು ಲೇಖನಗಳಿವೆ. ಬಹುಶ್ರುತರಾದ ಲೇಖಕರ ಕ್ಷೇತ್ರಕಾರ್ಯ ಮತ್ತು ಸಂಶೋಧನೆಯ ಫಲ ಈ ಗ್ರಂಥದ ಎಲ್ಲ ಲೇಖನಗಳಲ್ಲೂ ಕಾಣಿಸುತ್ತದೆ. ನಾಗಮಂಡಲ, ಭೂತಾರಾಧನೆ, ಮುಖವಣರ್ಿಕೆ, ಮೆಕ್ಕಿಕಟ್ಟೆಯ ಉರುಗಳು, ಸಿರಿಯ ಬಳಗ, ಕಲಾವಿದರು, ಹಾಳೆಯ ಮುಖವಾಡಗಳು, ಆರಾಧನೆಯ ಸಲಕರಣೆ, ಗೊಂಬೆಯಾಟ, ಭಿತ್ತಿಚಿತ್ರಗಳು-ಇವುಗಳಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚಿನ ಕಪ್ಪು ಬಿಳುಪಿನ, ಬಣ್ಣದ ಚಿತ್ರಗಳು ಈ ಪುಸ್ತಕದ ಪ್ರಯೋಜನವನ್ನು ಹೆಚ್ಚಿಸಿವೆ.
           ಡಾ| ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನದ ವೇಷಭೂಷಣಗಳ ಪ್ರಭಾವ ಮೆಕ್ಕಿಕಟ್ಟೆಯ ಉರುಗಳ ಮೇಲೆ ಆಗಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಎಸ್. ಎ. ಕೃಷ್ಣಯ್ಯನವರು ಹೇಳುವಂತೆ ಮೆಕ್ಕಿಟ್ಟೆಯ, ದೈವಗಣದ ವರ್ಗದಲ್ಲಿ ಅತಿದೊಡ್ಡ ಮರದ ಶಿಲ್ಪ (ಸು. 22 ಅಡಿ ಎತ್ತರ) ರಾಹುತಮಲ್ಲ ಮತ್ತು ಕೇಚ (ರ) ಮಲ್ಲ ದೈವ-ಈ ಶಿಲ್ಪದ ಕಿರೀಟವು ಯಕ್ಷಗಾನದ ರಾಜಕಿರೀಟದ ಪ್ರತಿಮೆಯನ್ನು ಪ್ರತಿಬಿಂಬಿಸುವುದರಲ್ಲಿ ಸಂಶಯವಿಲ್ಲ. ಈ ಕುರಿತು ಇನ್ನಷ್ಟು ವಿಚಾರ ಮಥನ ನಡೆಯಬೇಕಾಗಿದೆ. ಕೆ. ವೆಂ. ರಾಜಗೋಪಾಲರು ತನ್ನ ಲೇಖನದಲ್ಲಿ, ಪಾಣಾರ ಎಂಬ ಹಿಂದುಳಿದ ವರ್ಗದವರನ್ನೂ ಫನಿಯರರು = ನಾಗಾರಾಧಕರು ಎಂದೇ ಗುರುತಿಸಬೇಕಾಗುತ್ತದೆ ಎನ್ನುತ್ತಾರೆ. ದ್ರಾವಿಡ ಮೂಲದ 'ಪಾಣ' ಶಬ್ದಕ್ಕೆ ಗಾನ, ಕುಣಿತಗಳ ತಜ್ಞ ಎಂದು ಅರ್ಥವಿರುವಾಗ ಪಾಣಾರರನ್ನು ಫಣಿಯರರು ಎಂದು ಗುರುತಿಸುವ ಅಗತ್ಯವಿಲ್ಲ. ಅ. ಲ. ನರಸಿಂಹನ್ ತನ್ನ ಲೇಖನದಲ್ಲಿ ಕಾರ್ಕಳದ ಬಳಿಯ ಬಜೆಗೋಳಿಯ ಭೂತಸ್ಥಾನದ ಹಜಾರದಲ್ಲಿರುವ 77 ಜೈನ ಮುನಿಗಳ ಚಿತ್ರಗಳ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ. ಈ ಗ್ರಂಥದಲ್ಲಿ ಬಿಟ್ಟುಹೋಗಿರುವ ತುಳುನಾಡಿನ ಜಾತ್ರೆಗಳು, ರಥಶಿಲ್ಪ, ವಾಸ್ತುಶಿಲ್ಪ, ಮೂತರ್ಿಶಿಲ್ಪ, ರಂಗವಲ್ಲಿಗಳ ಕುರಿತು ಅಕಾಡೆಮಿ ಪ್ರತ್ಯೇಕ ಗ್ರಂಥವೊಂದನ್ನು ಪ್ರಕಟಿಸಬಹುದು.
          ಈ ಕೃತಿಯ ಪ್ರಯೋಜನವನ್ನು ಕೊಂಚ ಬಿಡಿಸಿ ಹೇಳಬಹುದು. ನಮ್ಮ ಕಲೆಗಳ (ಚಿತ್ರ-ಶಿಲ್ಪ-ದರ್ಶನ ಕಲೆಗಳು) ಅಭಿವೃದ್ಧಿಗೆ ಅವಶ್ಯವಾದ ಒಂದು ಐತಿಹಾಸಿಕ-ಧಾಮರ್ಿಕ ಕಲಾಪ್ರಜ್ಞೆಯು ಇದರಿಂದ ಒಡಮೂಡಬಹುದೆಂಬ ಭರವಸೆಯು ನಮಗಿದೆ. ಈ ಗ್ರಂಥದಲ್ಲಿ ಜಾನಪದ ಹಂತದ ಪರಿಶೀಲನೆಯು ಮುಖ್ಯವಾಗಿರಬಹುದಾದರೂ ಇಲ್ಲಿನ ತಾಂತ್ರಿಕ ಪ್ರಜ್ಞೆ ಕೂಡ ನಮ್ಮ ಕಲಾ ಪ್ರಕಾರಗಳಿಗೆ ದರ್ಶನ ಶಕ್ತಿ (ಗಿಣಚಿಟ ಖಣಡಿಜಟಿರಣ) ಯನ್ನು ಒದಗಿಸಬಲ್ಲದು ಎಂದು ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಆರ್. ಎಂ. ಹಡಪದ ಅವರು ಹೇಳಿದ್ದಾರೆ. ಪರಂಪರೆ ಅನುಕ್ರಮವಾಗಿ ಉತ್ತರಾಧಿಕಾರಿಗಳಿಗೆ ಹಸ್ತಾಂತರಗೊಳ್ಳುತ್ತದೆ. ಸೃಜನಶೀಲ ಕಲಾವಿದ ಪರಂಪರೆಯನ್ನು ಮತಾಂಧನಂತೆ ಸ್ವೀಕರಿಸುವುದಿಲ್ಲ. ಪರಂಪರೆಯ ಉತ್ತಮ ಅಂಶಗಳನ್ನು ಆಯ್ಕೆಮಾಡಿ, ತನ್ನ 'ಅಪೂರ್ವ ವಸ್ತು ನಿಮರ್ಾಣ' ಪ್ರತಿಭೆಯಿಂದ ಹೊಸದನ್ನು ಸೇರಿಸಿ ಪರಂಪರೆಯನ್ನು ಬೆಳೆಸುತ್ತಾನೆ. 'ಕಾಲಕ್ಕೆ ತಕ್ಕ ಕೋಲ ಕಟ್ಟಬೇಕು' ಎಂಬುದು ತುಳುನಾಡಿನ ಜನಪ್ರಿಯ ಗಾದೆ. 'ಕೋಲ' ಶಬ್ದಕ್ಕೆ ಅಲಂಕಾರ ಎಂಬ ಅರ್ಥವಿದೆ. ಲಲಿತಕಲಾ ಅಕಾಡೆಮಿ ಪ್ರಕಟಿಸಿರುವ 'ತುಳುವರ ಆಚರಣೆಗಳಲ್ಲಿ ಕಲಾವಂತಿಕೆಯ ಗ್ರಂಥ ಮತಾಚರಣೆಯ ಕಲಾ ಪರಂಪರೆಯ ಮೌಲಿಕ ಅಂಶಗಳನ್ನು ಶೋಧಿಸಿ ಉಳಿಸುವ ಕೆಲಸ ಮಾಡುವುದರ ಜೊತೆಗೆ ಅವುಗಳಿಗೆ ಕಾಲಕ್ಕೆ ತಕ್ಕ ಹೊಸ ಅಲಂಕಾರವನ್ನು ನೀಡಿ ಬೆಳೆಸಲು ಪ್ರೇರಣೆಯನ್ನೂ ನೀಡುತ್ತದೆ.


No comments:

Post a Comment