stat Counter



Thursday, May 26, 2011

ಚಕ್ರವರ್ತಿಯ ಬಟ್ಟೆಗಳು

ಚಕ್ರವರ್ತಿಯ ಬಟ್ಟೆಗಳು

  ಇಲ್ಲಿನ ಅನೇಕ ಬರೆಹಗಳ ಹಿಂದೆ ಒಂದು ಬಗೆಯ ಕೋಪ ಮತ್ತು ಅಸಹಾಯಕತೆಗಳಿವೆ.  ನಮ್ಮ ಕಾಲದ ಅಷ್ಟೇಕೆ, ಯಾವುದೇ ಕಾಲದ ಬದುಕಿನಲ್ಲಿ ತುಂಬಿಕೊಂಡಿರುವ ಆತ್ಮವಂಚನೆ ಮತ್ತು ಅನ್ಯ ವಂಚನೆಗಳ ಪ್ರಮಾಣವು ನನ್ನನ್ನು ದಿಕ್ಕುಗೆಡಿಸಿದೆ.  ನಾನು ಇವೆಲ್ಲವನ್ನೂ ಮೀರಿದ ದೇವತಾಮನುಷ್ಯನೆಂದಲ್ಲ.  ಆದರೆ ನಮಗೆಲ್ಲರಿಗೂ ಸುಳ್ಳೆಂದು ತಿಳಿದಿರುವ ಸಂಗತಿಗಳನ್ನು, ಅರ್ಧಸತ್ಯಗಳನ್ನು ನಾವೆಲ್ಲರೂ ಬಹಳವಾಗಿ ಜತನವಾಗಿ ಕಾಪಾಡಿಕೊಂಡು ಬಂದಿದ್ದೇವೆ.  ವ್ಯಕ್ತಿಯ ಸಾರ್ವಜನಿಕ ಇಮೇಜ್ ಮತ್ತು ಖಾಸಗೀ ಬದುಕುಗಳ ನಡುವೆ ಯಾವುದೇ ತಾಳಮೇಳವು ಇಲ್ಲದೇ ಹೋದಾಗ, ಮಾತುಗಳು ಬಿಚ್ಚಿಡುವುದಕ್ಕಿಂತ ಹೆಚ್ಚಾಗಿ ಬಚ್ಚಿಡುವುದನ್ನೇ ಕಾಯಕವಾಗಿ ಮಾಡಿಕೊಂಡಾಗ, ಹುಸಿಗಳ ಅಬ್ಬರವು ತಾನೇತಾನಾಗುತ್ತದೆ.  ಯಾವುದೋ ಒಂದು ಸಾಮಾಜಿಕ ಉದ್ದೇಶದಿಂದ, ಹೋರಾಟದ ಸಂದರ್ಭದಲ್ಲಿ ಮೂಡಿಬರುವ ವ್ಯೂಹತಂತ್ರಗಳಿಗೆ (ಸ್ಟ್ರಾಟಿಜಿ) ಕೊಂಚವಾದರೂ ಸಮರ್ಥನೆ ಇರುತ್ತದೆ.  ಬದಲಾಗಿ ತನ್ನನ್ನು ಪ್ರೊಮೋಟ್ ಮಾಡಿಕೊಳ್ಳುವ ಅಜೆಂಡಾದಿಂದ ಹುಟ್ಟುವ ಸುಳ್ಳುಗಳಿಗೆ ಅಂತಹ ನೆಪವೂ ಇರುವುದಿಲ್ಲ. ಚಕ್ರವರ್ತಿಯ ಬತ್ತಲೆತನದ ಬಗ್ಗೆ ಬಾಯಿಬಿಡಲು ಹಿಂಜರಿದ ಜನಸುಮುದಾಯದ ಬಗ್ಗೆ ನಾವು ಕೂಡ ಸುಳ್ಳುಗಳ ಮರೆಯಲ್ಲಿ ಸುಖವಾಗಿ ಬದುಕುತ್ತೇವೆ.  ನನ್ನ ದೃಷ್ಟಿಯಲ್ಲಿ ಆಂಡರ್ಸನ್ ಬರೆದ ಚಕ್ರವರ್ತಿಯ ಹೊಸ ಬಟ್ಟೆಗಳು ಎಂಬ ಕತೆಯು ನಮ್ಮ ಸಮಾಜದ ಬಹುದೊಡ್ಡ ರೋಗವೊಂದಕ್ಕೆ ಕನ್ನಡಿ ಹಿಡಿಯುತ್ತದೆ.

- ಡಾ| ಎಚ್.ಎಸ್. ರಾಘವೇಂದ್ರ ರಾವ್
ಚಕ್ರವರ್ತಿಯ ಹೊಸ ಬಟ್ಟೆಗಳು
- ಡಾ| ಎಚ್. ಎಸ್. ರಾಘವೇಂದ್ರ ರಾವ್
ಪ್ರಕಾಶಕರು - ಚಾಣಕ್ಯ ಪ್ರಕಾಶನ, ವಿಜಾಪುರ
2010.  ರೂ. 95.00

ಚಕ್ರವರ್ತಿಯ ಹೊಸ ಬಟ್ಟೆಗಳು

ಪರಿವಿಡಿ

1. ಚಕ್ರವರ್ತಿಯಹೊಸ ಬಟ್ಟೆಗಳು (01)
2. 'ಶೇಕಡಾ ಏಳರ ಖಳರು' - ಕೆಲವು ಟಿಪ್ಪಣಿಗಳು (06)
3. ನಿಜವೋ ಸುಳ್ಳೋ ನಿರ್ಧರಿಸಿ (12)
4. ದೇಶೀಯತೆ ಎಂಬ ಗಾಳಿಗೋಪುರ (18)
5. ಸಂಸ್ಕೃತಿಯ ಅಧ್ಯಯನ - ಕೆಲವು ಪ್ರತಿಕ್ರಿಯೆಗಳು (23)
6. ಕರ್ನಾಟಕದ ಸಂದರ್ಭದಲ್ಲಿ ಸಂಸ್ಕೃತಿಯ ಅಧ್ಯಯನ - ಪ್ರಶ್ನಾವಳಿ (30)
7. ಜನಪದ ಕಾವ್ಯದ ರೂಪಮೀಮಾಂಸೆ (34)
8. ಕರ್ನಾಟಕ  Vs  ಕನ್ನಡ: ಕೆಲವು ಅನುಮಾನಗಳು (41)
9. ಹಲವು ಬಣ್ಣದ ಹಕ್ಕಿ: ಐವತ್ತು ವರ್ಷಗಳ ಕನ್ನಡ ಸಾಹಿತ್ಯ (48)
10. ಕನ್ನಡ ಮತ್ತು ದಕ್ಷಿಣ ಕನ್ನಡ (56)
11. ಪದವಿ ತರಗತಿಗಳಲ್ಲಿ ಭಾಷಾ ಶಿಕ್ಷಣ ಕನ್ನಡ (67)
12. ಇವು ನೆನಪುಗಳಲ್ಲ (74)
13. ತಂತಿಯ ಮೇಲೆ ನಡಿಗೆ (77)
14. ಬೆರಳು ಕೇಳಿದ ಗುರು - ಕಣ್ಣು ಕೊಟ್ಟ ಗುರು (83)
15. ಖಾಸಗಿ ಮತ್ತು ಸಾರ್ವಜನಿಕ - ದೇವನೂರ ಮಹಾದೇವ ಮಾದರಿ (86)
16. ಧರ್ಮ ಮತ್ತು ಸಾಹಿತ್ಯ (89)
17. ಕನ್ನಡ ಸಾಹಿತ್ಯ, ಭಾಷೆ ಮತ್ತು ಭಾಷಾಶಾಸ್ತ್ರ : ಸಾಧನೆಗಳು, ಸಾಧ್ಯತೆಗಳು (110)
18. ಕನ್ನಡ ಸಾಹಿತ್ಯದಲ್ಲಿ ನೋವಿನ ನೆಲೆಗಳು (130)
chakravarthiya battegalu
[a collecton of critical essays in kannada]
-dr. h. s. raghavendra rao
edited by- aravinda chokkadi
published by
chanakya prakashana,
malaghana building,
meenakshi chouk,
vijapura-586101
phone-0835-2222197
pages-10+147=157
price-rs-95
first impression- 2010
cover page design- chandranath bajagoli

No comments:

Post a Comment