stat Counter



Tuesday, May 14, 2013

ಎಂ.ಎಸ್.ಶ್ರೀರಾಮ್ ಅವರ ಸಲ್ಮಾನ್ ಖಾನನ ಡಿಫಿಕಲ್ಟೀಸು


ಎಂ.ಎಸ್.ಶ್ರೀರಾಮ್ ಅವರ ಸಲ್ಮಾನ್ ಖಾನನ ಡಿಫಿಕಲ್ಟೀಸು

ಎಮ್.ಎಸ್,ಶ್ರೀರಾಮ್ ಅವರ ಈ ಕತೆ0ು ಶೀಷರ್ಿಕೆ0ುನ್ನು ನೋಡಿದಾಗ, ಇದೇನು! ಕನ್ನಡ ಲೇಖಕರೊಬ್ಬರು ಎಲ್ಲಾ ಬಿಟ್ಟು ಸಲ್ಮಾನ್ ಖಾನನ ಡಿಫಿಕಲ್ಟೀಸಿನ ಬಗ್ಗೆ ಬರೆದಿದ್ದಾರಲ್ಲ! ಎನಿಸಬಹುದು. ಕತೆ0ು ಮೊದಲ ಪ್ಯಾರಾ ಈ ಆಶ್ಚ0ರ್ುವನ್ನು ಪುಷ್ಟೀಕರಿಸುವಂತೆ0ೆು ಇದೆ.  ಕತೆ  ಮುಂದುವರೆ0ುುತ್ತಿದ್ದಂತೆ   ವಿಭಕ್ತಿ ಪ್ರತ್ಯ0ುವನ್ನು ತುಸು ಮಾರ್ಪಡಿಸಿಕೊಂಡು 'ಸಲ್ಮಾನ್ ಖಾನನಿಂದ ಡಿಫಿಕಲ್ಟೀಸು' ಎಂದು ಓದಿಕೊಂಡರೆ ಆರಂಭದ ಆಶ್ಚ0ರ್ು-ಗೊಂದಲಗಳು ಕೊಂಚ ಶಮನಗೊಂಡು 'ಎಲ್ಲಾ ಸರಿ0ಾಗಿದೆ' ಎಂದು ಸಮಾಧಾನವಾಗಬಹುದು. ಕತೆ ಓದಿ ಮುಗಿಸಿದ ಮೇಲೆ ಸಲ್ಮಾನ್ ಖಾನನ ಡಿಫಿಕಲ್ಟೀಸಿಗೂ ಸಲ್ಮಾನ್ ಖಾನನಿಂದ ಸೃಷ್ಟಿ0ಾದ ಡಿಫಿಕಲ್ಟೀಸಿಗೂ ಧ್ವನಿಪೂರ್ಣ ವೈದೃಶ್ಯವೊಂದು ಹೊಳೆದು ಮನಸ್ಸು ಭಾರವಾಗುತ್ತದೆ. ಆದರೆ ತಮ್ಮ ಬರವಣಿಗೆ0ುಲ್ಲಿನ ತಿಳಿಹಾಸ್ಯ ಮತ್ತು ತುಸು ಲಘುಧಾಟಿ0ು ನಿರೂಪಣೆಯಿಂದಾಗಿ ಮನಸ್ಸಿನ ಈ ಭಾರವನ್ನು ಓದುಗ ಕೇವಲ ಸುಖಿಸದಂತೆ ನಿರೋಧಿಸುವ ಲೇಖಕರು   ಹಾಗೆ ಮಾಡಿ ಓದುಗರ ಸಂವೇದನೆ0ುು ಭಾವುಕತೆ0ುಲ್ಲಿ ಅದ್ದಿಹೋಗುವುದನ್ನು ತಡೆ0ುುತ್ತಾರೆ. ಆ ಮೂಲಕ ಓದುಗರ ವಿಮರ್ಶನ ಪ್ರಜ್ಞೆ0ುನ್ನು ಜಾಗೃತವಾಗಿಡುತ್ತಾರೆ. ಕಾಲಾನುಕ್ರಮದ ಸರಳರೇಖಾತ್ಮಕ ನಿರೂಪಣಾ ವಿಧಾನವನ್ನು ಕೈಬಿಟ್ಟು, ಪ್ರಾ0ುಶಃ ಈ ಕತೆ0ು ಕೊನೆ0ು ಪ್ಯಾರಾ ಆಗಬಹುದಿದ್ದ ವಾಕ್ಯಗಳನ್ನು ಕತೆ0ು ಆರಂಭದಲ್ಲೇ ಓದಿಸಿ ಓದುಗರಲ್ಲಿ ಕುತೂಹಲ ಹುಟ್ಟಿಸುತ್ತಾರೆ. ಮೇಲುನೋಟಕ್ಕೆ ಪರಸ್ಪರ ಸಂಬಂಧವಿರದ ಪಾತ್ರಗಳನ್ನು ಘಟನೆಗಳನ್ನು ಹೂಡಿ ಅವುಗಳು ಓದುಗರ ಮನಸ್ಸಿನಲ್ಲಿ ಸಂಘಟಿತಗೊಂಡು ಒಂದು ಅನುಭವ ಸೃಷ್ಟಿ0ಾಗುವಂಥ ಕಥನಕ್ರಮವೊಂದು ಶ್ರೀರಾಮರ ಕಥಾಸಾಹಿತ್ಯದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಕತೆ0ುಲ್ಲೂ ಅಂಥದೊಂದು ಛಾ0ೆುಯಿದೆ. ನಿಜಜೀವನದ ಜೀವಂತ ವ್ಯಕ್ತಿಗಳನ್ನೂ ತಮ್ಮ ಕತೆಗಳ ಪಾತ್ರಗಳನ್ನಾಗಿ ಮಾಡುವ ಉಪಕ್ರಮವೂ ಇಲ್ಲಿ0ುೂ ಕಂಡುಬರುತ್ತದೆ.
      ಮುಂಬಯಿ0ು ಬಾಂದ್ರಾದಲ್ಲಿ ವಾಸಿಸುವ ಚಿತ್ರನಟ ಸಲ್ಮಾನ್ ಖಾನನಿಗೆ ಒಂದು ದಿನ ಹೈದರಾಬಾದಿನ ರೇಖಾರಾಣಿ ಎಂಬ ಹುಡುಗಿಯಿಂದ ಪತ್ರವೊಂದು ಬರುತ್ತದೆ. ಕೈ ಬರಹದ ಈ ಇನ್ ಲ್ಯಾಂಡ್ ಲೆಟರು ಅವನ ಗಮನವನ್ನು ಸೆಳೆ0ುುತ್ತದೆ. ಆದರೆ ಆ ಪತ್ರದ ಬಗ್ಗೆ ಅವನೇನೂ ಮಾಡುವಂತಿರಲಿಲ್ಲ. ಏಕೆಂದರೆ ಆ ಹುಡುಗಿ0ು 'ಅತಾ-ಪತಾ'ದ ಬಗ್ಗೆ ಆ ಪತ್ರದಲ್ಲಿ ಮಾಹಿತಿ ಇರಲಿಲ್ಲ. ಸ್ವವಿಳಾಸವಿಲ್ಲದ ಆ ಪತ್ರವನ್ನು ಏನು ಮಾಡುವುದೆಂದು ತಿಳಿ0ುದೆ ಅವನು ಅದನ್ನು ತನ್ನ 'ಬೀಯಿಂಗ್ ಹ್ಯೂಮನ್ ಫೌಂಡೇಷನ್'ಗೆ ಕಳಿಸಿ ಇರಿಸುತ್ತಾನೆ. ಈ ರೇಖಾರಾಣಿ 0ಾರು? ಅವಳಿಗೂ ಸಲ್ಮಾನ್ ಖಾನನಿಗೂ ಏನು ಸಂಬಂಧ? ಅವಳೇಕೆ ಇವನಿಗೆ ಪತ್ರ ಬರೆದಳು? ಆ ಪತ್ರದಲ್ಲಿ ಅವಳು ಏನು ಬರೆದಿದ್ದಳು? ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಕತೆ0ು ಮುಂದಿನ ಭಾಗಗಳಿಗೆ ಅನಿವಾ0ರ್ುವಾಗಿ ಹೋಗಬೇಕು.
         ರೇಖಾರಾಣಿ ದೋಮಲ್ಗೂಡಾದ ದ್ವಾರಕಾ ಹೈಸ್ಕೂಲಿನಲ್ಲಿ ಒಂಬತ್ತನೇ ತರಗತಿ0ುಲ್ಲಿ ಓದುತ್ತಿದ್ದಳು. ಇಂಗ್ಲೀಷ್ ಮೀಡಿ0ುಂ ಎಂದು ಹೇಳುವುದನ್ನು ಅವಳು 0ಾವತ್ತೂ ಮರೆ0ುುತ್ತಿರಲಿಲ್ಲ. ಪ್ರತೀ ಬಾರಿ0ುೂ ತರಗತಿ0ುಲ್ಲಿ ಮೊದಲ ಅಥವಾ ಎರಡನೆ0ು ಸ್ಥಾನದಲ್ಲಿರುತ್ತಿದ್ದ ಅವಳಿಗೆ ಡಿಗ್ರಿ ಮಾಡಿ ಒಂದು ಕಾಲ್ ಸೆಂಟರಿನಲ್ಲಿ ಕೆಲಸಹಿಡಿ0ುಬೇಕೆಂಬ ಬ0ುಕೆಯಿತ್ತು. ಕಾಲ್ ಸೆಂಟರಿನ ಹುಡುಗಿ0ುರೆಲ್ಲಾ ಚೆನ್ನಾಗಿ ಇಂಗ್ಲೀಷ್ ಮಾತಾಡುತ್ತಾರೆಂದು ರೇಖಾರಾಣಿ ಕೇಳಿದ್ದಳು. ಬರುವ ಮೂರು ತಿಂಗಳುಗಳಲ್ಲಿ ಪರೀಕ್ಷೆ ಬರೆದು ಮುಗಿಸಿದರೆ ನಂತರ ಸಲ್ಮಾನ್ ಖಾನನ ಬಾಡಿಗಾಡರ್್ ಸಿನೇಮಾ ತೋರಿಸುವುದಾಗಿ ಅಪ್ಪ ಪೆಂಟ0್ಯು ಹೇಳಿದ್ದ. ಈಗಾಗಲೇ ವಾಂಟೆಡ್ ಮತ್ತು ದಬಾಂಗ್ ನೋಡಿದ್ದ ರೇಖಾ ತನ್ನ ಕಾಲ್ ಸೆಂಟರಿನ ನೌಕರಿ0ುನ್ನು ಬ0ುಸಿದಷ್ಟೇ ಉತ್ಕಟವಾಗಿ ಬಾಡಿಗಾಡರ್್ ಚಿತ್ರದ ಬಿಡುಗಡೆ0ುನ್ನು ಎದುರು ನೋಡುತ್ತಿದ್ದಳು. ಕೆಳ ಮಧ್ಯಮವರ್ಗದ ಸಣ್ಣ ಆಸೆಗಳು ಮತ್ತು ಆಶೋತ್ತರಗಳನ್ನು ಬಿಂಬಿಸುವ ಈ ಪ್ಯಾರಾ ಇನ್ನೂ ಒಂದು ಕಾರಣದಿಂದ ಆಕಷರ್ಿಸುತ್ತದೆ. ಅದು 'ಪೆಂಟ0್ಯು' ಎಂಬ ಹೆಸರು. ಅವನು ಹಿಂದೆ ಇದ್ದಿಲಂಗಡಿ0ೊಂದರಲ್ಲಿ ಕೆಲಸಕ್ಕಿದ್ದ; ಆಗ ಅಡವಿ ರಾಮುಡು ಎಂಬ ಚಿತ್ರವನ್ನು ನೋಡಿ ಬಂದಿದ್ದ; ಈಗ ಅವನು ರಾಜೂ ಸೇಠ್ ಎಂಬ ಸಾಹುಕಾರನ ಬಳಿ ಕೆಲಸ ಮಾಡುತ್ತಾನೆ; ಇನ್ನೋವಾ ಗಾಡಿ0ುಲ್ಲಿ, ಮಹಿಳೆ0ುರನ್ನು ಅವರ ಅಪಾಟರ್್ಮೆಂಟ್ಗಳಿಂದ ಅವರು ಕೆಲಸಮಾಡುವ ಜಾಗಕ್ಕೆ ಕರೆದೊ0ು್ದು , ಅವರ ಶಿಫ್ಟ್ ಮುಗಿದ ಮೇಲೆ ವಾಪಸು ಕರೆತರುವ ಡ್ರೈವರ್ ಕೆಲಸದಲ್ಲಿದ್ದ; ಅವನ ಸಂಬಳ ಹತ್ತು ಸಾವಿರ ರೂಪಾಯಿ ಮುಂತಾದ ವಿವರಗಳನ್ನು ಕಥೆ ಮುಂದೆ ನೀಡುತ್ತಾ ಹೋಗುತ್ತದೆ.
        ಪೆಂಟ0್ಯುನ ಇನ್ನೋವಾ ಅಪಘಾತಕ್ಕೆ ಈಡಾಗುತ್ತದೆ. ಅವನ ಆಸ್ಪತ್ರೆ ಖಚರ್ಿಗೆ ಸಾವಿರಾರು ರೂಪಾಯಿಗಳು ಬೇಕಾಗುತ್ತವೆ. ಅವರಿವರು ಒಂದಷ್ಟು ಸಹಾ0ು ಮಾಡಿದರೂ ಅವನ ಹೆಂಡತಿ0ು ಬಂಗಾರ ಮಾರಾಟವಾಗುತ್ತದೆ. 'ಇಪ್ಪತ್ತು ಸಾವಿರ ರೂಪಾಯಿ ಕರಮ ಚಂದಾನಿ ಸೇಠ್ ಬಳಿ ಸಾಲವಾಗಿತ್ತು. ತಿಂಗಳಿಗೊಂದು ರೂಪಾಯಿ0ು ಬಡ್ಡಿಗೆ ತೆಗೆದ ಸಾಲದ ಕಂತನ್ನೂ ವಸೂಲು ಮಾಡಲು ತಪ್ಪದೇ ಪ್ರತೀ ತಿಂಗಳ ಐದನೆ0ು ತಾರೀಖು ಸೇಠ್ ಹಾಜರಾಗುತ್ತಿದ್ದ'. ಪೆಂಟ0್ಯುನ ಹೆಂಡತಿ ಮನೆಗೆಲಸದ ಮನೆಗಳ ಸಂಖ್ಯೆ0ುನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ತಿಂಗಳಿಗೆ ನೂರೈವತ್ತು ಕಬಳಿಸುತ್ತಿದ್ದ ಕೇಬಲ್ ಟಿ.ವಿ.0ುನ್ನು ಬಂದು ಮಾಡಬೇಕಾಗುತ್ತದೆ. ಪರೀಕ್ಷೆಗೆ ಓದುತ್ತಿದ್ದ ರೇಖಾರಾಣಿ ಆಗಾಗ ತನ್ನ ಅಮ್ಮನೊಂದಿಗೆ ಮನೆಗೆಲಸ ಮಾಡಲು ಹೋಗಬೇಕಾಗುತ್ತದೆ. ತನಗೆ ಸಹಾ0ುವಾಗುವುದರ ಜೊತೆಗೆ ರೇಖಾರಾಣಿಗೂ ಕೆಲಸ ತಿಳಿ0ುಲಿ ಎಂದು ಅವಳ ಅಮ್ಮ ರಾಮುಲಮ್ಮ ಅವಳನ್ನು ಎಲ್ಲೆಡೆಗೆ ಕರೆದುಕೊಡು ಹೋಗಲಾರಂಭಿಸಿದ್ದಳು. ಹೀಗೆ ಪೆಂಟ0್ಯು ಅಪಘಾತಕ್ಕೀಡಾಗಿ ಮನೆ0ುಲ್ಲೇ ಉಳಿ0ುಬೇಕಾದ ಅನಿವಾ0ರ್ುತೆ ಅವರ ಮನೆ0ು ದಿನಚರಿ0ು ಮೇಲೆ0ೆು ಅಗಾಧ ಪರಿಣಾಮ ಬೀರಿತ್ತು. ಅವನ ಕೆಲಸವೂ ಹೋಗಿತ್ತು. ಅಪ್ಪ ಮನೆ0ುಲ್ಲಿ; ಅಮ್ಮ ಹೊರಗೆ. ಈ ಪರಿಸ್ಥಿತಿಗೆ ಹೊಂದಿಕೊಂಡು ರೇಖಾ ಪರೀಕ್ಷೆಗಾಗಿ ಚೆನ್ನಾಗಿ0ೆು ಓದುತ್ತಿರುತ್ತಾಳೆ.    ಪರೀಕ್ಷೆ 0ಾವಾಗ ಮುಗಿ0ುುತ್ತದೆ, 0ಾವಾಗ ತಾನು ಸಲ್ಮಾನ್ ಖಾನನ ಬಾಡಿಗಾಡರ್್ ನೋಡುತ್ತೇನೆ ಎಂಬ ತವಕದಲ್ಲಿರುತ್ತಾಳೆ.
      ಸಿನೇಮಾಕ್ಕೆ ದುಡ್ಡಾದರೆ ಸಾಕು ತಾನು ಕಾಚೀಗೂಡಾದವರೆಗೆ ನಡೆದೇ ಹೋಗುತ್ತೇನೆಂದು ರೇಖಾ ರಾಮುಲಮ್ಮನಿಗೆ ಹೇಳುತ್ತಾಳೆ. ಆದರೆ 'ರಾಮುಲಮ್ಮ ಎಪ್ಪತ್ತೈದು ರೂಪಾಯಿ ಸಾಮಾನ್ಯದ ಮೊತ್ತವೇನೂ ಅಲ್ಲ ಎಂದು ರೇಖಾರಾಣಿಗೆ ಅನೇಕ ಬಾರಿ ಹೇಳಿದಳು. ರೇಖಾರಾಣಿಗೂ ಅದು ತಿಳಿದ ವಿಚಾರವೇ. ಆದರೂ ಮೂರು ತಿಂಗಳ ಕಷ್ಟಕ್ಕೆ ಫಲವಾಗಿ ಸಲ್ಮಾನ್ ಖಾನನ ಸಿನೇಮಾವೊಂದನ್ನು ನೋಡುವುದು ಮಹಾಪಾಪವೆಂದೇನೂ ಅವಳಿಗನ್ನಿಸಲಿಲ್ಲ'. ರಾಮುಲಮ್ಮ ಮಗಳನ್ನು ಮನೆಗೆಲಸಕ್ಕೆ ಅಟ್ಟುತ್ತಾಳೆ. ಪಾ0ುಸ ಮಾಡುವುದಾಗಿ ಹೇಳುತ್ತಾಳೆ. ರೇಖಾರಾಣಿಗೆ ಸಿಟ್ಟೇ ಬರುತ್ತದೆ. 'ನನ್ನನ್ನು ಸಿನೇಮಾಕ್ಕೆ 0ಾವಾಗ ಕಳಿಸುತ್ತೀ0ು ಹೇಳು'ಎಂದು ಜಬರ್ದಸ್ತಿನಿಂದ ಕೇಳಿದರೆ ರಾಮುಲಮ್ಮ ಅವಳ ತಲೆ0ು ಮೇಲೆ ಜೋರಾಗಿ ಮೊಟಕಿ ಮನೆಗೆಲಸಕ್ಕೆ ದಬ್ಬುತ್ತಾಳೆ. ಮನೆಗೆಲಸ ಮುಗಿಸಿ ರೇಖಾರಾಣಿಮನೆಗೆ ಹಿಂದಿರುಗುತ್ತಿದ್ದಾಗ ದಾರಿ0ುಲ್ಲಿ ಅವಳ ಕಣ್ಣಿಗೆ ಅನಾಥವಾಗಿ ಬಿದ್ದಿದ್ದ ನೂರರ ಒಂದು ನೋಟು ಕಣ್ಣಿಗೆ ಬೀಳುತ್ತದೆ. 'ಮೊದಲಿಗೆ ಬಗ್ಗಿ ತೆಗೆ0ುಲು ಹೆದರಿದಳಾದರೂ, ಗಾಂಧಿ ತಾತನ ಮುಖವಿರುವ ಜಾಗದಲ್ಲಿ ಸಲ್ಮಾನ್ ಖಾನನ ಮುಖ ಕಾಣಿಸಿದಂತಾಗಿ ಅವಳು ಅದನ್ನು ತನ್ನ ಕೈ0ುಲ್ಲಿ ಹಿಡಿದಳು. ಕೆಡವಿಕೊಂಡವರು ಅದನ್ನು ಹುಡುಕಿ ಬರಬಹುದೆಂದು ಸುತ್ತಮುತ್ತ ನೋಡಿದಳು. 0ಾರೂ ಕಾಣಲಿಲ್ಲ. ಮೈಸಮ್ಮ ತಾಯಿ ತನಗಾಗಿ0ೆು-ತಾನು ಕಷ್ಟಪಟ್ಟು ಓದಿ ಮುಗಿಸಿದ್ದಕ್ಕಾಗಿ0ೆು ಈ ಹಣವನ್ನು ಕಳಿಸಿರಬಹುದೆಂದು, ಕಣ್ಣಿಗೆ ಅದ್ದಿ ಮನೆ0ುತ್ತ ಓಡಿದಳು'. ಇದರ ಪರಿಣಾಮ ಮಾತ್ರ ಅನಿರೀಕ್ಷಿತವಾಗಿರುತ್ತದೆ.  ಮಗಳ ಕೈ0ುಲ್ಲಿ ನೂರು ರೂಪಾಯಿ ನೋಟು ಕಂಡು ರಾಮುಲಮ್ಮ ಕೆಂಡಾಮಂಡಲವಾಗುತ್ತಾಳೆ. 'ಕೆಲಸಕ್ಕೆಂದು ಕಳಿಸಿದರೆ ಕಳ್ಳತನ ಮಾಡಿ ಬರುವುದಲ್ಲದೇ ರಸ್ತೆ0ುಲ್ಲಿ ನೂರು ರೂಪಾಯಿ ಸಿಕ್ಕಿತೆಂದು ಚೆವಿಲೋ ಪೂವು ಇಡುತ್ತೀ0ಾ-0ಾವ ಹೊಟ್ಟೆ0ುಲ್ಲಿ ಎಂಥಾ ಮಗಳಾಗಿ ಹುಟ್ಟಿದೆ ಎಂದು ಚೆನ್ನಾಗಿ ಬ0್ದುದ್ದಲ್ಲದೇ ತಲೆಗೂ ಬೆನ್ನಿಗೂ ಇಕ್ಕಿದಳು. ರೇಖಾರಾಣಿ ಏನೇ ಹೇಳಿದರೂ ಕೇಳುವ ಮೂಡಿನಲ್ಲಿ ರಾಮುಲಮ್ಮ ಇರಲಿಲ್ಲ'. 0ಾರ ಮನೆ0ುಲ್ಲಿ ಮಗಳು ಮನೆಗೆಲಸ ಮಾಡಿಬಂದಿದ್ದಳೋ ಅಲ್ಲಿಗೆ ಹೋಗುತ್ತಾಳೆ. ಮನೆ0ು 0ು0ುಜಮಾನಿ 'ಅದು ತನ್ನದೇ ಅಲ್ಲವೇ ಅನ್ನುವ ಖಾತ್ರಿ ತನಗಿಲ್ಲವಾದರೂ, ರಾಮುಲಮ್ಮ ತನ್ನ ಮನೆಯಿಂದಲೇ ರೇಖಾರಾಣಿ ಕದ್ದಿದ್ದಾಳೆ ಎಂದು ಖಂಡಿತವಾಗಿ ಹೇಳಿಕೊಳ್ಳುತ್ತಿರುವುದರಿಂದ ಅದನ್ನು ವಾಪಸ್ಸು ಪಡೆದಳು'. ರಾಮುಲಮ್ಮ ಕೆಲಸವನ್ನೂ ಕಳೆದುಕೊಳ್ಳುತ್ತಾಳೆ, ಆ ಬಿಲ್ಡಿಂಗಿನವರ ವಿಶ್ವಾಸವನ್ನೂ ಕಳೆದುಕೊಳುತ್ತಾಳೆ.
     ಈ ಪ್ರಸಂಗವು ಲಂಕೇಶರ ಅಕ್ಕ ಕಾದಂಬರಿ0ು ಒಂದು ಪ್ರಕರಣವನ್ನು ನೆನಪಿಸುವಂತಿದೆ. ಅಕ್ಕ ದೇವೀರಿ ಕ್ಯಾತನ ಕೈ0ುಲ್ಲಿ ಐವತ್ತು ರೂಪಾಯಿ ನೋಟನ್ನಿಟ್ಟು ತಾನು  ಕೂಲಿಗೆ ಹೊರಟ ಮೇಲೆ ಅಕ್ಕ ವಾಪಸು ಬರುವಷ್ಟರಲ್ಲಿ ಈ ನೋಟನ್ನು 'ತೀರಿಸಿಬಿಡಬೇಕು' ಎಂದು ನಿರ್ಧರಿಸುತ್ತಾನೆ. ಆದರೆ ನಡೀತಿದ್ದಂಗೆ ಬ0ು ಶುರುವಾ0ು್ತು. ಐವತ್ತು ರೂಪಾ0್ನು ಜೇಬಿನಿಂದ ತೆಗೆದ್ರೆ ಕಂಡೋರ್ ಏನಂದಾರು? ದಿನಸಿ ಅಂಗಡಿ0ು ರಾಮಚಂದ್ರಶೆಟ್ಟಿ0ುಂತೂ ತಕ್ಷಣ ಪೋಲೀಸರಿಗೆ ಹೇಳ್ತಾನೆ. ಉಳಿದ ಅಂಗಡಿಗಳವರದೂ ಬೇರೆ ಕತೆ. ಕೊನೆಗೆ 'ರಾಜಕುಮಾರ್ ಪಿಚ್ಚರ್' ನೋಡಿಬಿಡೋಣ ಎಂದು 'ರಿಕ್ಸಾ' ಕರೆದರೆ ಡ್ರೈವರ್ 'ಕಾಸ್ ಎಸ್ಟ್ ಮಡಗಿದ್ದೀ ಮಗಾ?' ಎಂದು ವ್ಯಂಗ್ಯದಿಂದ ಕೇಳುತ್ತಾನೆ. ಕ್ಯಾತ ಐವತ್ತು ರೂಪಾಯಿ ನೋಟು ತೋರಿಸಿದರೆ ಅನುಮಾನದಿಂದ ನೋಡುತ್ತಾನೆ. 'ಮಾವನ ಮನಿ0ಾಗೆ ಇರಾಕೆ ತ0ಾರಾಗು' ಎನ್ನುತ್ತಾನೆ. ಕ್ಯಾತನಿಗೆ ಅವಮಾನವೆನಿಸುತ್ತದೆ: ಕ್ಯಾತ ಅದೇನು ತಪ್ಪು ಮಾಡಿದ್ದ? ಎಲ್ಲರಂಗೆ ರಿಕ್ಸಾ ಕರೆದು ಮಜೂರಿ ಕೊಡ್ತೀನಿ, ರಾಜ್ ಪಿಚ್ಚರ್ಗೆ ಬಿಡು, ಅಂದಿದ್ದ. ಇಸ್ಟಕ್ಕೆ ಮಾವನ ಮನೆಗೆ ಕ್ಯಾತ 0ಾಕೆ ಹೋಗಬೇಕು..ಈ ಐವತ್ತು  ರೂಪಾಯಿಗೆ ಬೆಂಕಿಹಾಕ... ಲಘುಧಾಟಿ0ುಲ್ಲೇ ವರ್ಗಸಮಾಜದ ಸ್ವರೂಪವನ್ನು ತೋರುವ ಕನ್ನಡದ ಅತ್ಯುತ್ತಮ ಮಾದರಿಗಳೊಂದಿಗೆ ಶ್ರಿರಾಮರ ಕತೆ0ುೂ ಸೇರುವುದು ಹೀಗೆ. ಬಡವರ ಕೈ 0ಾವತ್ತೂ ಖಾಲಿ ಎಂಬುದೊಂದು ಗೃಹೀತ ಸತ್ಯವಷ್ಟೆ. ಅಕಸ್ಮಾತ್ ಅದು ತುಂಬಿದ್ದರೆ ಅದು ಕೇವಲ ಒಂದು ಅಪವಾದ. ಇದು ಅಪವಾದವೆಂದು ಗುರುತಿಸುವ ಔದಾ0ರ್ುವನ್ನು ಸಮಾಜದಿಂದ ನಿರೀಕ್ಷಿಸುವುದಾದರೂ ಹೇಗೆ? ಆ ಹಣ ಕದ್ದದ್ದೇ ಎಂದು ಸಮಾಜ ತೀಮರ್ಾನಿಸಿದರೆ ಸಮಾಜದ ದೃಷ್ಟಿ0ುಲ್ಲಿ ಅದು ಕೇವಲ ಸಹಜ. ರೇಖಾರಾಣಿ0ು ಪ್ರಸಂಗದಲ್ಲಿ ಇದು ಇನ್ನಷ್ಟು ದುರ್ಭರ; ಏಕೆಂದರೆ ಸ್ವತಃ ಅವಳ ತಾಯಿಗೇ ಮಗಳ ಬಗ್ಗೆ ಅನುಮಾನ. ಎಳೆ ಹುಡುಗಿ ರೇಖಾರಾಣಿಗೆ ಈ ಪ್ರಸಂಗವು ಎಷ್ಟು ಆಘಾತಕಾರಿ0ಾಗುತ್ತದೆ ಎಂದರೆ ಅದರ ತೀವ್ರತೆ0ುಲ್ಲಿ ಅವಳಿಗೊಂದು ಸತ್ಯ ಹೊಳೆದು ಬಿಡುತ್ತದೆ: ಉತ್ಕಟವಾಗಿ ಸಲ್ಮಾನ್ ಖಾನನ ಚಿತ್ರವನ್ನು ಬ0ುಸಿದ್ದೇ ತಪ್ಪಾಗಬಹುದೆಂದು ರೇಖಾರಾಣಿಗೆ ಅರ್ಥವಾಯಿತು. ತನ್ನ ವರ್ಗ ಮಿತಿಗಳನ್ನು ರೇಖಾ ಮರೆತಿದ್ದರಿಂದಲೇ-ಅಂದರೆ ಬಡವ ನೀ ಮಡಗಿದ ಹಾಗೆ ಇರು ಎಂಬ ಸಾಮಾಜಿಕ ಆದೇಶವನ್ನು ಮೀರಿದ್ದರಿಂದಲೇ-ಅವಳು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳಬೇಕಾಯಿತು ಎಂಬ ವ್ಯಂಗ್ಯದಲ್ಲಿ ವರ್ಗಸಮಾಜದ ವಿಕೃತಿಗಳು, ವೈರುಧ್ಯಗಳು ಬ0ುಲಾಗುತ್ತವೆ. ದುರಂತದ ಪ್ರಮಾಣದಲ್ಲಿ ತುಂಬ ವ್ಯತ್ಯಾಸವಿದ್ದರೂ ಚೋಮನ ದುರಂತವೂ ಇದೇ ಬಗೆ0ುದಲ್ಲವೆ? ಸೂಕ್ಷ್ಮವಾಗಿ ನೋಡಿದರೆ ಚೋಮನ ದುಡಿ0ುಲ್ಲಿ ಚೋಮನ ನಿಜವಾದ ದುರಂತ ಅಡಗಿರುವುದು ಅವನ ಜಾತಿಮೂಲ, ವರ್ಗಮೂಲಕ್ಕಿಂತ ಹೆಚ್ಚಾಗಿ ಆ ಮೂಲಗಳಿಂದ ಬಂದ ವ್ಯಕ್ತಿ0ೊಬ್ಬನು ಸ್ವಂತ ಸಾಗುವಳಿ0ು ಕನಸನ್ನು ಇಟ್ಟುಕೊಂಡಿದ್ದ ಎಂಬುದರಲ್ಲಿ. ಅವನ ಕನಸಿಗೆ ಜಮೀಂದಾರನಾದ ಸಂಕಪ್ಪ0್ಯುನೂ ಸ್ಪಂದಿಸುವುದಿಲ್ಲ; ಸ್ವತಃ ಚೋಮನ ಕುಟುಂಬದವರೂ ಸ್ಪಂದಿಸುವುದಿಲ್ಲ ಅಲ್ಲವೇ? ಚೋಮನ ಸಹಜ ಆಸೆ0ುನ್ನು  ಅವನು ತನ್ನ ಮಿತಿ0ುನ್ನು ಅತಿಕ್ರಮಿಸುವ ಆಸೆ ಎಂದು ವ್ಯಾಖ್ಯಾನಿಸುವಲ್ಲಿ ಅವನ ಸಮಾಜ ತನ್ನ ಕ್ರೌ0ರ್ುವನ್ನು ತೋರುತ್ತದೆ.
       ರೇಖಾರಾಣಿ0ುನ್ನು ಪೆಂಟ0್ಯುನ ಮಗಳು ಎಂದು ಕಲ್ಪಿಸಿಕೊಂಡು ಶ್ರೀರಾಮ್ ತಿರುಮಲೇಶರ  ಪೆಂಟ0್ಯುನ ಅಂಗಿ ಕವಿತೆ0ೊಂದಿಗೂ ಒಂದು ಬಗೆ0ು ಅಂತರ್ಪಠ್ಯೀ0ುತೆ0ುನ್ನು ಸೂಚಿಸಿದ್ದಾರೆ. ಇದ್ದಿಲಂಗಡಿ0ುಲ್ಲಿ ಕೆಲಸ ಮಾಡುತ್ತಿದ್ದ ಪೆಂಟ0್ಯುನಿಗೆ ಅಡವಿ ರಾಮುಡು ಸಿನೇಮಾಗೆ ಹೋಗುವ ಆಸೆ. ಪೋಲೀಸು ಪಟೇಲನ ಮನೆಗೆ ಇದ್ದಿಲನ್ನು ತೆಗೆದುಕೊಂಡು ಹೋಗಬೇಕೆಂಬುದನ್ನು ಮರೆತು ಗರಿಗರಿ ಬಿಳಿಬಟ್ಟೆ ತೊಟ್ಟು ಹೊರಟ ಅನ್ನುವಷ್ಟರಲ್ಲಿ ಪೋಲೀಸು ಪಟೇಲ ಎದುರಾಗುತ್ತಾನೆ. 'ಅಂದಿನಿಂದ-ಅಂದಿನಿಂದ 0ಾತಕ್ಕೆ, ಆ ಕ್ಷಣ-/ದಿಂದ ಪೆಂಟ0್ಯುನ ಬಿಳಿ ಅಂಗಿ/ಎಂದೂ ಬಿಳಿ0ುಂಗಿ0ಾಗಿರಲಿಲ್ಲ' ಎಂದು ತಿರುಮಲೇಶರ ಕವಿತೆ ದಾಖಲಿಸುತ್ತದೆ. ಪೆಂಟ0್ಯುನ ಮಗಳ ಪಾಡು ಇದಕ್ಕಿಂತ ಬೇರೆ0ುಲ್ಲ. ಸಲ್ಮಾನ್ ಖಾನನಿಗೆ ಸ್ವವಿಳಾಸವಿಲ್ಲದ ಖಾರವಾದ ಕಾಗದ ಬರೆದು 'ಇನ್ನೆಂದೂ ಸಲ್ಮಾನನ ಸಿನೇಮಾಗಳನ್ನು ನೋಡುವುದಿಲ್ಲವೆಂದು ಅವಳು ಶಪಥಂಗೈದಳು'. ಸಲ್ಮಾನ್ ಖಾನನ ಡಿಫಿಕಲ್ಟೀಸು ಜಾಸ್ತಿ0ಾಗುವುದು ಹೀಗೆ.
                                 *****
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228


No comments:

Post a Comment