stat Counter



Wednesday, July 16, 2014

ಶ್ರೀಮತಿ ಶಾಂತಾ ಅಮೂರ್ ನಿಧನ

ಡಾ.ಜಿ.ಎಸ್.ಆಮೂರ ಅವರ ಪತ್ನಿ ಶ್ರೀಮತಿ ಶಾಂತಾ ಗುರುರಾಜ ಆಮೂರರು ಅವರು ಶನಿವಾರ ಅಪರಾಹ್ನ 85ರ ಪ್ರಾಯದಲ್ಲಿ ತೀರಿಕೊಂಡಿದ್ದಾರೆ.  ಅವರು ಅರವತ್ತು ಮೂರು ವರುಷದ ದಾಂಪತ್ಯ ಜೀವನ ನಡೆಸಿ, ಹೆಸರಿಗೆ ಅನ್ವರ್ಥಕವೆನಿಸುವಂತ ಸ್ವಭಾವ, ಗುಣ, ನಡತೆ ಅವರದು 1941-42ರಲ್ಲಿ ಹೈಸ್ಕೂಲು ವಿದ್ಯಾರ್ಥಿನಿಯಾಗಿದ್ದಾಗ, ತಮ್ಮ ಮನೆಯ ಹಿರಿಯರ ಹಾದಿಯಲ್ಲಿ ನಡೆಯುವವಳಂತೆ ಆಕೆ, ಅಣ್ಣ, ಅಪ್ಪಂದಿರೊಂದಿಗೆ ಚಲೇ ಜಾವ್ ಚಳವಳಿಯಲ್ಲಿ ಭಾಗವಹಿಸಿದ್ದರು.  ಅಲ್ಪವಯಿ ಹೆಣ್ಣು ಎಂಬ ಕಾರಣದಿಂದ ಜೇಲಿಗೆ ಹಾಕಲಿಲ್ಲ ಇವರನ್ನು.  ಬಿ.ಎಸ್.ಸಿ. ಫಿಜಿಕ್ಸ್ ಪದವೀದರೆಯಾಗಿ ಶಾಲಾ ಶಿಕ್ಷಕಿಯಾದರು; ಗದಗಿನ ವಿದ್ಯಾದಾನ ಸಮಿತಿ ಶಾಲೆಯಲ್ಲಿ-1956-64ರಲ್ಲಿ ವಿಜ್ಞಾನ ಶಿಕ್ಷಕಿಯಾಗಿ ವಿದ್ಯಾರ್ಥಿನಿಯರಿಗೆ ಪ್ರಿಯರಾಗಿದ್ದರು.  ಅವರದು ಮೌನ-ಓದು; ಆದರೆ ಸಂದರ್ಭೋಚಿತವಾಗಿ ಸುತ್ತ ಮುತ್ತಲ ಜನರೊಂದಿಗೆ ಬೆರೆಯುತ್ತಿದ್ದರು.  ಮನೆ ಗೆಲಸದಲ್ಲೇ ನಿರತರಾಗಿ, ಪತಿಗೆ, ಅವರ ವೃತ್ತಿ-ಹವ್ಯಾಸಗಳಿಗೆ ಸಂಪೂರ್ಣ ನೈತಿಕ ಬೆಂಬಲ-ಸಹಕಾರ ಕೊಟ್ಟು; ಮೂವರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳನ್ನು ಉಚ್ಚ ವಿದ್ಯಾಭ್ಯಾಸಕ್ಕೆ ಅಣಿ ಮಾಡಿದರು.  ಮತ್ತೊಬ್ಬರ ಏಳಿಗೆಯಲ್ಲಿ ತನ್ನ ಸಾರ್ಥಕತೆ ಕಂಡುಕೊಳ್ಳುವ ಸೌ.ಶಾಂತಾ, ತನಗಾಗಿ ಏನನ್ನೂ ಅಪೇಕ್ಷಿಸಿದವರಲ್ಲ; ಆಗ್ರಹ ಪಡಿಸಿದವರಲ್ಲ; ನಿಸ್ಪೃಹತೆಯ ಜೀವ ಆಕೆಯದು.  ಧೈರ್ಯ, ಸ್ವಾವಲಂಬನೆ, ಸರಳತೆ, ನಿಷ್ಕಲ್ಮಷತೆ, ಪರೋಪಕಾರಗಳು ಆಕೆಯ ಜೀವನ ಸಾಧನೆ ಮತ್ತು ಸಾಧನೆಗಳಾಗಿದ್ದವು.  ಗೃಹಿಣಿಯಾಗಿದ್ದೇ 'ಸಂತ' ಜೀವನ ಗಿಳಿಸಬಹುದೆಂಬುದಕ್ಕೆ ಸೌ.ಶಾಂತಾ ಉದಾಹರಣೆ ಆಗಿದ್ದಾರೆ.
[ಮಾಹಿತಿ - ಬೇಂದ್ರೆ ಭವನ ಧಾರವಾಡ   ]

No comments:

Post a Comment