stat Counter



Monday, July 14, 2014

ಕೆ. ಪಿ. ರಾವ್ ಅವರಿಗೆ ಅಭಿನಂದನೆಗಳು -ಯು. ಬಿ. ಪವನಜ

ಅದ್ಭುತ, ಅತ್ಯದ್ಭುತ, ಆಶ್ಚರ್ಯ, ಪರಮಾಶ್ಚರ್ಯ, ಸಂತಸ, ಅತಿ ಸಂತಸ!!! ಏನಿದೆಲ್ಲ ಒಟ್ಟಿಗೆ ಎಂಬ ಕುತೂಹಲವೇ? ಹೇಳುತ್ತೇನೆ ಕೇಳಿ.
ಕನ್ನಡದ ಯಾವುದೇ ಸಾಹಿತ್ಯ ಸಮ್ಮೇಳನಕ್ಕೆ ವಿಜ್ಞಾನ ಸಾಹಿತ್ಯ (ಅಥವಾ ಮಾಹಿತಿ ಸಾಹಿತ್ಯ) ರಚಿಸುವವರನ್ನು ಅಥವಾ ವಿಜ್ಞಾನಿ/ತಂತ್ರಜ್ಞಾನಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಕೇಳಿದ್ದೀರಾ? ಹಾಗೆ ಆಗಲು ಸಾಧ್ಯವಿದೆ ಎಂದು ನಂಬಿದ್ದೀರಾ? ನಾನು ಹಲವು ವರ್ಷಗಳಿಂದ ಹೇಳುತ್ತ ಬಂದಿದ್ದೇನೆ -ಸಾಹಿತ್ಯವೆಂದರೆ ಕೇವಲ ಕಾದಂಬರಿ, ಕಥೆ, ಕವನ, ಪ್ರಬಂಧ, ವಿಮರ್ಶೆ (ಇತ್ಯಾದಿ ಸೃಜನಶೀಲ ಎಂಬ ಹಣೆಪಟ್ಟಿ ಅಂಟಿಸಿಕೊಂಡವು) ಮಾತ್ರವಲ್ಲ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ, ಕಾನೂನು (ಇತ್ಯಾದಿ ಸೃಜನೇತರ ಎಂದು ಕರೆಯಿಸಿಕೊಳ್ಳುವಂತಹ ಮಾಹಿತಿ ಸಾಹಿತ್ಯಗಳು) -ಇವುಗಳ ಬಗ್ಗೆ ಬರೆಯವುದೂ ಸಾಹಿತ್ಯವೇ ಎಂದು. ಅವನ್ನು ಬರೆಯುವವರಿಗೂ ಅದೇ ಮಟ್ಟದ ಮನ್ನಣೆ ನೀಡುವುದು ಅಗತ್ಯ ಎಂದು. ಕೊನೆಗೂ ನನ್ನ ಮಾತಿಗೆ ಬೆಲೆ ಬರುತ್ತಿದೆ.
‌ಆಗಸ್ಟ್ ೨ ಮತ್ತು ೩ ರಂದು ಪೊಳಲಿಯಲ್ಲಿ ಜರುಗಲಿರುವ ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾರತೀಯ ಭಾಷಾ ಗಣಕ ಪಿತಾಮಹ ಶ್ರೀ ಕೆ. ಪಿ. ರಾವ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಈಗ ತಾನೆ ತಿಳಿದು ಬಂತು. ಶ್ರೀ ಕೆ. ಪಿ. ರಾವ್ ಅವರಿಗೂ ದ.ಕ. ಸಾಹಿತ್ಯ ಸಮ್ಮೇಳನದ ಆಯೋಜಕರಿಗೂ ಅಭಿನಂದನೆಗಳು.
{ ಯು. ಬಿ. ಪವನಜ ಅವರ Face Book  ನಿಂದ ಆಯ್ಕೆ ಮಾಡಿದ ಲೇಖನ }

No comments:

Post a Comment