stat Counter



Thursday, November 6, 2014

ಕಥಾ ವಾಚನಾಭಿರುಚಿ ಶಿಬಿರ ಶಿರಸಿಯಲ್ಲಿ -6-12-2014

ಕಥಾ ವಾಚನಾಭಿರುಚಿ ಶಿಬಿರ ಶಿರಸಿಯಲ್ಲಿ
ಸಾಹಿತ್ಯದ ಓದಿನಲ್ಲಿ ಅಭಿರುಚಿ ಬೆಳೆಸುವ ಮತ್ತು ಓದಿನ ಹೊಸಬಗೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಸದಾ ವೈವಿಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವ ಕನ್ನಡ ಪುಸ್ತಕ ಪ್ರಾಧಿಕಾರವು 2 ದಿನದ ಕಥಾ ಸಾಹಿತ್ಯದ ಕುರಿತಾದ ವಾಚನಾಭಿರುಚಿ ಶಿಬಿರವನ್ನು ಡಿಸೆಂಬರ್ 06-07 ರಂದು ಶಿರಸಿಯಲ್ಲಿ ನಡೆಸಲು ತೀಮರ್ಾನಿಸಿದೆ. ಶಿಬಿರದಲ್ಲಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಬಂಜಗೆರೆ ಜಯಪ್ರಕಾಶ, ವಿಷ್ಣು ನಾಯ್ಕ, ಡಾ.ಎಂ.ಜಿ.ಹೆಗಡೆ, ಡಾ. ಸಬೀಹಾ ಭೂಮಿಗೌಡ, ಸುನಂದಾ ಕಡಮೆ, ಡಾ.ವಿನಯಾ ವಕ್ಕುಂದ, ಡಾ.ಸಬಿತಾ ಬನ್ನಾಡಿ, ರಾಜಶೇಖರ ಹತಗುಂದಿ, ಎಂ.ಡಿ. ವಕ್ಕುಂದ, ಡಾ. ಅನುಪಮಾ ಎಚ್.ಎಸ್, ಮುಂತಾದ ಗಣ್ಯರು ಭಾಗವಹಿಸುತ್ತಿದ್ದು ಶಿಬಿರದ ನಿರ್ದೇಶಕರಾಗಿ ಡಾ. ಶ್ರೀಪಾದ ಭಟ್ ನಡೆಸಿಕೊಡಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಆಸಕ್ತರು ವಾಚನಾಭಿರುಚಿ ಶಿಬಿರದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಲು ವಿನಂತಿ. ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಆಯ್ದ ವಿದ್ಯಾರ್ಥಿಗಳು, ಯುವ ಲೇಖಕರು, ಯುವ ಓದುಗರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದ್ದು ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 24 ನವೆಂಬರ್ 2014. ಪ್ರತಿಯೊಬ್ಬರೂ ತಮ್ಮ ಕಿರು ಪರಿಚಯದೊಂದಿಗೆ ಪತ್ರ/ಇಮೇಲ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕಾದ ವಿಳಾಸ: ಮಾಧವಿ ಭಂಡಾರಿ, ಕೆರೆಕೋಣ, ಸದಸ್ಯರು, ಕನ್ನಡ ಪುಸ್ತಕ ಪ್ರಾಧಿಕಾರ, ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ ಮಾರಿಗುಡಿ, ಶಿವಾಜಿ ಚೌಕ, ಶಿರಸಿ, ಉತ್ತರ ಕನ್ನಡ, ಇ-ಮೇಲ್ ಐಡಿ: madhavikerekona@gmail.com.ಹೆಚ್ಚಿನ ಮಾಹಿತಿಗಾಗಿ ಫೋನ್ ಸಂಪರ್ಕ- 9449548165, 9008520205
ಮಾಧವಿ ಭಂಡಾರಿ ಕೆರೆಕೋಣ
ಸದಸ್ಯ ಸಂಚಾಲಕರು.
ವಾಚನಾಭಿರುಚಿ ಶಿಬಿರ

No comments:

Post a Comment