stat Counter



Tuesday, March 17, 2015

ಅನುಷಾ ಆಚಾರ್ಯ- ಉಡುಗೊರೆ -. ಕಾಲಚಕ್ರ

             ಅನುಷಾ ಆಚಾರ್ಯ
1. ಉಡುಗೊರೆ

ನಾನು ಯಾರಾದರೇನು? ನಿನ್ನಲ್ಲಿ ಉಳಿದಿಲ್ಲ ಇನ್ನು
ಕಳೆದ ಕ್ಷಣಗಳ ನೆನಪು ನಿನ್ನ ಕಾಲಡಿಯ ಮಣ್ಣು
ಅಳಿಸಲಸಾದ್ಯವೇ ನಿನಗೆ ನಮ್ಮ ನಡುವಿನ ಅಂತರ?
ಕಾಣಬೇಕಿಲ್ಲ ನಿನಗೆ ಪ್ರೀತಿ ತುಂಬಿದ ಚಂದಿರ.

ಚಂದಿರನ ಚಂದನದ ಕಳೆಯಲ್ಲಿ ಕೈತುತ್ತಿನ ನೆನಪು,
ತೊಡೆಗೆ ತಲೆಯಿಟ್ಟು ನೀನತ್ತ ನೆನಪು,
ನನ್ನ ಕೊರಳಿಗೆ ತೋಳಹಾರ ಹಾಕಿ ನೀ ಮುತ್ತಿಟ್ಟ ನೆನಪು,
ನಿನ್ನ ಹಾಲು ಬಟ್ಟಲ ಕಣ್ಣು ಮಿಂಚಿದ ನೆನಪು

ಎಲ್ಲವು ಬರಿ ನೆನಪು.. ಕನಸೇನೊ ಎಂಬ ಬ್ರಾಂತಿಯ ನೆನಪು
ತೊಂಬತ್ತರ ದಿನಗಳಿವು ತುಂಬಿದೆ ಮೈಮನಕೆರಡೂ ಮುಪ್ಪು
ಅರಿವಾಗಿದೆ ಈ ಹೃದಯಕೆ, ಕಲ್ಪನೆಯಲಿ ತಾ ಮಾಡಿದ ತಪ್ಪು
ಆದರೂ ಮಗನೆ, ಮನದ ಮೂಲೆಯಲಿ ಮರೆಯಾಗದೆ ಉಳಿದಿದೆ
ನೀನಿತ್ತ ವಚನದ ನೆನಪು..

ನನ್ನ ಬಾಳದೋಣಿ ಮುಳುಗುವ ದಿನದಿ ನೀ ಹುಟ್ಟಾಗುವೆ ಎಂಬ ಬರವಸೆ,
ಜೀವನ ಕಾಲ್ಮುರಿದು ಕುಂಟುವ ಕ್ಷಣದಿ ನೀ ಊರುಗೋಲಾಗುವೆ ಎಂಬಾಸೆ,
ಕೊನೆಯಾಯ್ತು ನನ್ನ ಎಪ್ಪತ್ತರ ಜನುಮ ದಿನಕೆ ನೀನಿತ್ತ ಉಡುಗೊರೆಯಲಿ
ದಶಕ ಎರಡು ಕಳೆದರೂ ನೆಟ್ಟದೆ ನನ್ನ ದೃಷ್ಠಿ ನೀ ಬರುವ ದಾರಿಯಲಿ

ಬರಲಾರೆಯಾ ಮಗನೆ ಈ ಮಂಜುಗಣ್ಣು ಮುಚ್ಚುವುದರೊಳಗೆ
ಕರೆದೊಯ್ಯೆಯ ಈ ಕೃತಕ ಪ್ರೀತಿಯ ವೃದ್ದಾಶ್ರಮದ ಹೊರಗೆ
ಬಾನದಾರಿಯಲ್ಲಿ ಸೂರ್ಯ ಬೆಳಗಿ ಮುಳುಗುತಿರುವನು ಬಿರುಸಿನಲಿ
ನನ್ನ ಈ ದಿನವೂ ಕೊನೆಯಾಗದಿರಲಿ ವಿಶಾದದ ನಗುವಿನಲಿ||





2. ಕಾಲಚಕ್ರ

ಬಂಧುಗಳಿದ್ದರೂ ಬೀದಿ ಪಾಲಾಗಿರುವೆ ನಾನ
ಬಾಂಧವ್ಯ ಬಸವಳಿದು ಸುಕ್ಕುಗಟ್ಟಿದೆ ಮೈಮನವು
ಕಡಲೆಸೆದ ಕಸ ನನ್ನ ಬದುಕು
ಕಡುಗತ್ತಲೆ ಕವಿದರೂ ಮನಕೆ, ಶ್ವೇತವುಟ್ಟಿದೆ ತನುವು

ನೆನಪ ಹೊಳೆ ಹರಿಯುವುದು ಕೆಲವೊಮ್ಮೆ
ನನ್ನವರ ತಾಯನ್ನು ಹೊರಗಟ್ಟಿದ್ದೆ ಅಂದೊಮ್ಮೆ
ಇಂದು ತಿಳಿಯುತಿದೆ ಆ ರೋಧನದ ಬೆಲೆ
ತಿರುಳಿಲ್ಲದ ಬದುಕಲ್ಲಿ ನಾನಿಂದು ತಿರುಬೋಕಿಯಲೆ

ಅಂದು ಮೆದ್ದಿದ್ದೆ ಮಂಡಿಗೆ ಮಹರಾಣಿಯಂತೆ ಮೆರೆದು
ನನ್ನ ಮುತ್ತಿದ್ದರು ಬಾಂಧವರು ನೊಣದಂತೆ ಅಂದು
ತಿರುಗಿದೆ ಕಾಲಚಕ್ರ ಮಂಡಕ್ಕಿಯೇ ಮೃಷ್ಠಾನ್ನ ನನಗೆ
ಇಂದೂ ಮುತ್ತಿರುವರು ನನ್ನ ಆದರೆ ನೊಣಗಳು ವಿಪಯಾ9ಸ ನೋಡು.

ಈ ಜನ್ಮದ ಕಮ9 ಇದೇ ಜನ್ಮಕ್ಕೆ
ಅಂದು ಮೆರೆದವಳು ಇಂದು ಬೇಡುತ್ತಿರುವೆ ಪುಡಿಗಾಸಿಗೆ
ಪ್ರಾಯಶ್ಚಿತ್ತವಿದು ನಾ ಮಾಡಿದ ಕಮ9ಕ್ಕೆ
ನಾ ಸಾಕ್ಷಿ ಪ್ರತಿಯೊಬ್ಬರಿಗೂ ಪಾಪಪುಣ್ಯಗಳಿಗೆ....






No comments:

Post a Comment