stat Counter



Thursday, March 24, 2016

ಫ್ರೊ/ ಶ್ರೀಪತಿ ತಂತ್ರಿ ಅವರ -ಸೃಷ್ಟಿ ಪ್ರಳಯ, ಮರುಸೃಷ್ಟಿ - ಮುರಳಿಧರ ಉಪಾಧ್ಯ ಹಿರಿಯಡಕ

ಪ್ರೋ| ಪಿ. ಶ್ರೀಪತಿ ತಂತ್ರಿಯವರು ಸಮಾಜಶಾಸ್ತ್ರದ ಕುರಿತು ಅಧಿಕಾರವಾಣಿ ಯಿಂದ ಮಾತನಾಡಬಲ್ಲ ವಿದ್ವಾಂಸರು. ’ಸನೂತನ ಧರ್ಮ ಜಿಜ್ಞಾಸೆ ’. ಗ್ರಂಥವನ್ನು  ಬರೆದಿರುವ ಪೋ| ತಂತ್ರಿಯವರ ಹೊಸಗ್ರಂಥ '-ಸೃಷ್ಟಿ ಪ್ರಳಯ, ಮರುಸೃಷ್ಟಿ'
ಪ್ರಳಯ ಪುರಾಣಗಳನ್ನು  ಸಮಾಜ ಶಾಸ್ತ್ರದ ನೆಲೆಯಿಂದ   ತೌಲನಿಕ ಅಧ್ಯಯನ ಮಾಡುವುದು ಈ ಪುಸ್ತಕದ ಲೇಖಕರ  ಉದ್ದೇಶ. ಗ್ರೀಕ್, ರೋಮ್, ಸುಮೇರಿಯಾ- ಬೆಬಿಲೋನಿಯಾ, ಮತ್ತು ಸೆಮಿಟಿಕ್ ಹಾಗೂ ಭಾರತದ  ಪುರಾಣಗಳಲ್ಲಿರುವ ಪ್ರಳಯ ಕತೆಗಳನ್ನು ಕುರಿತ ಎಂಟು ಲೇಖನಗಳು ಮತ್ತು ’ಆರ್ಯರು ’ ಎಂಬ ಸುದೀರ್ಘ ಲೇಖನ       ಈ ಗ್ರಂಥದಲ್ಲಿವೆ. ಸುಮೇರಿಯಾದ ಉತನಪಿ಼.. ಹೇಳುವ  ಕತೆ, ಗ್ರೀಕ್ ಪುರಾಣದ ಗೇಯಾ -ಯುರೇನಸ್-ಕ್ರೋನಸ್ ರ ಕತೆ, ಡ್ಯೂಕಾಲಿಯನ್ ನ ಕತೆ, ಪೈರಿನ  ದೇವತೆ ಡೆಮೆಟರ್ ಮತ್ತು ಅವಳ ಮಗಳು ಪೆರ್ಸೆ ಫೋನಳ ಕತೆ, ಹಿಬ್ರೂ ಪುರಾಣ ಮತ್ತು ಬೈಬಲ್ ಗಳಲ್ಲಿರುವ ’ನೋವಾ’ನ್ ಕತೆ, ’ಶತಪಥ ಬ್ರಾಹ್ಮಣ’ ದಲ್ಲಿರುವ ಮನುವಿನ ಕತೆಗಳನ್ನು ವಿವರಿಸಿ ಅವುಗಳಲ್ಲಿರುವ ಆಶಯ ಸಾಮ್ಯಗಳನ್ನು ಲೇಖಕರು ಗುರುತಿಸಿದ್ದಾರೆ.

ಜನರು ದೇವರನ್ನು ಮರೆತು ದುಷ್ಟರಾದಾಗ ದೇವತೆಗಳ ಕೋಪದಿಂದ ಪ್ರಳಯ, ಒಳ್ಳೆಯ ರಾಜ ಆತನ ಕುಟುಂಬ ಮತ್ತು ಎಲ್ಲ ಬೀಜ ಪ್ರಕಾರಗಳನ್ನು ದೇವರು ಒಂದು ನಾವೆಯಲ್ಲಿಟ್ಟು ರಕ್ಷಿಸುವುದು, ಪ್ರಳಯದ ಅನಂತರ ಮರುಸೃಷ್ಟಿ-.ಇದು ಎಲ್ಲ ಪ್ರಳಯ ಪುರಾಣಗಳಲ್ಲಿ ಎದ್ದು ಕಾಣುವ ಅಂಶ.

ಕಿ.ಪೂ.೨೦೦೦ ದ ಹಿಂದಿನ ಕಾಲದಲ್ಲಿ ಯುಫ್ರೆಟಿಸ್  ಮತ್ತು ಟೈಗ್ರಿಸ್ ನದಿಗಳ ಮಧ್ಯದ ಬಯಲು ಪೂರ್ತಿ ಜಲಪ್ರಳಯದಲ್ಲಿ ಮುಳುಗಿ ಹೋದ ಐತಿಹಾಸಿಕ ಘಟನೆಯ ನೆನಪು, ಸುಮೇರಿಯಾ, ಗ್ರೀಕ್, ಸೆಮಿಟಿಕ್ ಮತ್ತು ಭಾರತದ ಪುರಾಣಗಳಲ್ಲಿ ಬಹುರೂಪಿ ಬೆಳೆದಿದೆ ಎಂದು ಲೇಖಕರು ವಿಶ್ವಾಸಾರ್ಹ ಆಧಾರಗಳಿಂದ, ತರ್ಕಬದ್ಧವಾಗಿ ಅನುಮಾನಗಳನ್ನು ಮಂಡಿಸಿದ್ದಾರೆ. ಮೂಲಪುರಾಣವೊಂದರ ಅನ್ವೇ಼ಷಣಿಗಿಂತ, ಈ ವಿವಿಧ ಪುರಾಣಕತೆಗಳಲ್ಲಿ ಪ್ರಾಚೀನ ಮಾನವ ಸಮಾಜದ  ಸ್ಥಿತಿಗತಿ ಹೇಗೆ ಕಾಣಿಸುತ್ತದೆ ಎಂದು ವಿಶ್ಲೇಷಿಸುವುದು ಲೇಖಕರ  ಉದ್ದೇಶವಾಗಿದೆ. 

ಮತಾಂತರ ಕಾರಣಗಳಿಂದಾಗಿ ಪಾಶ್ಚಾತ್ಯ ದೇಶಗಳಲ್ಲಿ  ಪುರಾಣಗಳು ಸೃಜನಶೀಲವಾಗಿ ಸ್ಥಗಿತಗೊಂಡಿವೆ. ಆದರೆ ಭಾರತದಲ್ಲಿ ಪುರಾಣಗಳು ಇಂದಿಗೂ ಸೃಜನಶೀಲ ಪ್ರೇರಣೆ ನೀಡುತ್ತಿವೆ. ಶ್ರೀಪತಿ ತಂತ್ರಿಯವರ  ಈ ಗ್ರಂಥದಲ್ಲಿ  ಪುರಾಣಗಳ ನಿಗೂಢಲೋಕವನ್ನು ಅನಾವರಣಗೊಳಿಸುವ, ಅರ್ಥೈ ಸುವ, ವ್ಯಾಖ್ಯಾನಿಸುವ ಪಾಂಡಿತ್ಯ ಪೂರ್ಣ ಪ್ರಯತ್ನವಿದೆ.
ಈ ಗ್ರಂಥದಲ್ಲಿರುವ ’ಆರ್ಯರು’ ಎಂಬ್ ಲೇಖನದಲ್ಲಿ  ಪ್ರೋ| ತಂತ್ರಿಯವ್ರು, " ಆರ್ಯ-ದ್ರಾವಿಡವೆನ್ನುವುದು ಕೇವಲ ಪ್ರದೇಶವಾಚಕವೂ ಅಲ್ಲ, ಭಾಷಾ ವಾಚಕವೂ ಅಲ್ಲ, ಜನಾಂಗವಾಚಕದ ಅಂಶವೇ ಅದರ ಮೂಲವೆನ್ನುವುದನ್ನು ಗುರುತಿಸುವ ಅಗತ್ಯವಿದೆ. ಕಳೆದ ನಾಲ್ಕು ಸಾವಿರ ವರ್ಷಗಳ ಸುದೀರ್ಘ ಅವಧಿಯಲ್ಲಿ ಆರ್ಯರ ರಕ್ತವು ಜನಾಂಗ ನಂತರದಲ್ಲಿ ಸಾಕಷ್ಟು ಮಿಶ್ರ ಲಕ್ಷಣಗಳನ್ನು ಪಡೆದುಕೊಂಡು ಬಂದರೂ ಇಂದಿಗೂ ಗುರುತಿಸಲು ಸಾಧ್ಯವಾದಷ್ಟು ಶಾರೀರಿಕ ಭಿನ್ನತೆಯನ್ನು ಭಾರತದ  ಜನಸಮುಚ್ಚಯದಲ್ಲಿ  ನಾವು ಕಾಣಬಹುದಾಗಿದೆ" ಎಂದಿದ್ದಾರೆ.  

’ಆರ್ಯ-ದ್ರಾವಿಡವೆನ್ನುವ   ಕಲ್ಪನೆ ಪಾಶ್ಚಾತ್ಯರ ಮಿಥ್ಯಾ ಕಲ್ಪನೆ’ ಎಂಬ ವಾದವನ್ನು ಅವರು ಒಪ್ಪುವುದಿಲ್ಲ. ಈ ಲೇಖನವನ್ನು ಇನ್ನಷ್ಟು ವಿಸ್ತರಿಸಿ, ಪ್ರತ್ಯೇಕ್ ಪುಸ್ತಕರೂಪವನ್ನು ನೀಡಿದರೆ ಸಂಶೋಧಕರಿಗೆ ಪ್ರಯೋಜನವಾಗುತ್ತದೆ.

ಪ್ರೋ| ಶ್ರೀಪತಿ ತಂತ್ರಿಯವರ ವಾದಗಳ, ಅನುಮಾನಗಳ ಹಿನ್ನೆಲೆಯಲ್ಲಿ ಸಮಾಜ ಶಾಸ್ತ್ರದ ಪಾಂಡಿತ್ಯವಿದೆ., ಅವರ ತೌಲನಿಕ ಅಧ್ಯಯನದ ಹೊಳಹುಗಳಿವೆ. ಅವರ ಸಂಪ್ರಂಬಂಧಗಳಲ್ಲಿ ಶಂ.ಬಾ. ಜೋಶಿಯವರ ಶೈಲಿಯ ಕ್ಲಿಷ್ಟತೆ ಇಲ್ಲ. ಡಾ| ಶಿವರಾಮ ಕಾರಂತರು ಮುನ್ನುಡಿಯಲ್ಲಿ ಹೇಳಿರುವಂತೆ, " ಕನ್ನಡ ಭಾಷೆಯಲ್ಲಿ ಇಂಥ ಗ್ರಂಥಗಳು ಬಹಳ ಅಪರೂಪ. "
ಮುರಳೀಧರ ಉಪಾಧ್ಯ ಹಿರಿಯಡಕ
ಲೇ : ಪ್ರೋ| ಪಿ. ಶ್ರೀಪತಿ  ತಂತ್ರಿ
ಪ್ರ: ಎಸ್.ಬಿ.ಎಸ್. ಪಬ್ಲಿಷ ರ್ಸ್    ರ್ಚ್      
ಡಿಸ್ಟ್ರಿಬ್ಯೂಟ ರ್ಸ್ ರ್ರ್
 ಶ್ಕುಮಾರಪಾರ್ಕ ಈಸ್ಟ್,                                                                                                  
ಬೆಂಗಳೂರು-೫೬೦೦೦೧
ಮೊದಲ ಮುದ್ರಣ - {? }        
{ ಉದಯವಾಣಿ- 10-8-1996 ]

No comments:

Post a Comment