stat Counter



Thursday, June 8, 2017

ಉದ್ಯಾವರ ನಾಗೇಶ್ ಕುಮಾರ್ -ಇನ್ನಿಲ್ಲದ ಗೆಳೆಯ ಶ್ರೀಪತಿ ಕೃಷ್ಣಾಚಾರ್ಯ

ಈಗಷ್ಟೇ ಗೆಳೆಯ ಶ್ರೀಪತಿ ಕೃಷ್ಣಾಚಾರ್ಯರ ಅಂತ್ಯ ಸಂಸ್ಕಾರವನ್ನು ಮುಗಿಸಿ ಮನೆಗೆ ಬಂದೆ..ಈ ಶ್ರೀಪತಿ ಕೃಷ್ಣಾಚಾರ್ಯ ಪಿಯುಸಿಯ ಎರಡು ವರುಷ ನನ್ನ ಕ್ಲಾಸ್ಮೇಟ್ ಆನಂತರ ಗೆಳೆಯರಾಗಿ ಬದಲಾದವರೂ. ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸಿತ್ತಾ ಇದ್ದವರು. ಈ ಮನುಷ್ಯ ಪಿಯುಸಿಯಲ್ಲಿರುವಾಗ ಸಾಮಾನ್ಯ ವಿದ್ಯಾರ್ಥಿಯಾಗಿದ್ದು ಕೊಂಡು .ಗೆಳೆಯರ ಮಧ್ಯ ಅದ್ಭುತ ಜೋಕುಗಳನ್ನು ಸಿಡಿಸುತ್ತಾ.ಲವಲವಿಕೆಯಲ್ಲಿ ಇದ್ದವರು. ಲೆಕ್ಚರರ್ಗಳ ಕ್ಲಾಸ್ ಬೋರಾದಾಗ ಪೇಪರ್ನಲ್ಲಿ ಜೋಕ್ ಬರೆದು ಸರ್ಕುಲೇಟ್ ಮಾಡುತ್ತಿದ್ರು.. ಅದನ್ನು ಓದಿ ನಾವು ನಗು ತಡೆದು ಕೊಂಡರೆ..ನಗು ತಡೆಲಾಗದ ಬಡಪಾಯಿಗಳು ಉಪನ್ಯಾಸಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು....
ಪಿಯುಸಿಯಲ್ಲಿ ಇರುವಾಗಲೇ...ಪತ್ತೇದಾರಿ ಕಾದಂಬರಿಯನ್ನು ಓದುತ್ತಿದ್ದ ನನಗೆ ಬೈರಪ್ಪರನ್ನು ಪರಿಚಯಿಸಿದವರು ಆಚಾರ್ಯರು . ಪಿಯುಸಿಯ ನಂತರ ನಮ್ಮ ಕಾಲೇಜುಗಳು ಬೇರೆ ಬೇರೆಯಾದರೂ ನಮ್ಮ ಗೆಳೆತನ ಮುರಿಯಲಿಲ್ಲ. ಅದು ಮುಂದುವರಿಯಿತು.ಡಿಗ್ರಿ ಮುಗಿಸಿ ಅವರು ಟೆಕ್ಸಟೈಲ್ ಉದ್ಯಮ ಪ್ರಾರಂಭಿಸಿದ ನಂತರ ಅವರ ಅಂಗಡಿಗೇ ಹೋಗಿ ಕುಳಿತು ಮಾತನಾಡ ತೊಡಗಿದಾಗ ಅವರಲ್ಲೊಂದು ದೊಡ್ಡ ಬದಲಾವಣೆಯಾದದ್ದು ನನ್ನ ಗಮನಕ್ಕೆ ಬಂತು ..ಚಿತ್ರಕಲೆಯ ಬಗ್ಗೆ. ಸಂಗೀತದ ಬಗ್ಗೆ, ಸಾಹಿತ್ಯದ ಬಗ್ಗೆ, ಜ್ಯೋತಿಷ್ಯಶಾಸ್ತ್ರದ ಬಗ್ಗೆ,ತತ್ವ ಶಾಸ್ತ್ರದ ಬಗ್ಗೆ. ರಂಗಭೂಮಿಬಗ್ಗೆ ಆದ್ಯಾತ್ಮದ ಬಗ್ಗೆ ಅಧಿಕಾರಯುತವಾಗಿ ನಿಖರವಾಗಿ ಮಾತನಾಡ ಹತ್ತಿದರು. ಇಂದಿಗೂ ನನಗೆ ಪ್ರಶ್ನೆಯಾಗಿಯೇ ಉಳಿದದ್ದು ಇಂತಹಾ ಜ್ಞಾನ ಅವರಿಗೆ ಸಿದ್ದಿಸಿದ್ದು ಹೇಗೆ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ಎಲ್ಲ ಕ಼್ಷೇತ್ರದ ವಿದ್ವಾಂಸರು ಅವರೊಂದಿಗೆ ಚರ್ಚಿಸಲು ಬರುತ್ತಿದ್ದರು.ಪಾಠ ಹೇಳಿಸಿ ಕೊಳ್ಳಲು ಬರುತ್ತಿದ್ದರು.
ಆದರೆ ಅವರ ಒಟ್ಟು ಪ್ರತಿಭೆ ಸಾರ್ವಜನಿಕವಾಗಿ ಅನಾವರಣಗೊಳ್ಳಲೇ ಇಲ್ಲ.ಸಾರ್ವಜನಿಕರ ಕಣ್ಣಲ್ಲಿ ಅವರೊಬ್ಬ ಬಟ್ಟೆ ವ್ಯಾಪಾರಿ..ಸಾಮಾನ್ಯ ರಲ್ಲಿ ಸಾಮಾನ್ಯರಾದ ಆಚಾರ್ಯರು ವ್ಯವಹಾರದಲ್ಲಿ ಸೋತು ಮನೆಸೇರಿದ ನಂತರ ಹೊರ ಜಗತ್ತಿಗೂ ದೂರವಾದರು. ಮನೆಯಲ್ಲಿ ಪೈಟಿಂಗ್, ಕಂಪ್ಯೂಟರ್, ಜ್ಯೋತಿಷ್ಯದಲ್ಲಿ ಮುಳುಗಿದರು. ಅರೋಗ್ಯ ಹದಗೆಟ್ಟಿತು. ಕೊನೆಗೆ ಹೋಗೆರ ಬಿಟ್ಟರು..ನನಗೆ ಅವರು ಹೋದ ಬಗ್ಗೆ ನೋವಿಲ್ಲ.
ಆದರೆ ಅವರ ಪಾಂಡಿತ್ಯ ಜಗತ್ತಿಗೆ ಗೊತ್ತಾಗದೇ ಹೋಯಿತಲ್ಲ ಎಂಬನೋವು. ಒಂದು ವೇಳೆ ಆಚಾರ್ಯರು ಕಾಲೇಜಲ್ಲಿ ಉಪನ್ಯಾಸಕರಾಗಿ ಇದ್ದರೆ ಅವರಿಂದು ಏಲ್ಲೋ ಇರುತ್ತಿದ್ದರು
ತಾತ್ವಿಕವಾಗಿ ನಮ್ಮಿಬ್ಬರಲ್ಲಿ ಬಿನ್ನಾಭಿಪ್ರಾಯವಿತ್ತು. ಅದರೆ ಅದೆಂದೂ ನಮ್ಮ ವೈಯಕ್ತಿಕ ಗೆಳತನದ ಮಧ್ಯ ಬರಲ್ಲಿಲ್ಲ.ಕೊನೆಯತನಕ ಗೆಳತನ ಮುಂದುವರಿಯಿತು.
ಶ್ರೀಪತಿ ಇಂದು ನಮ್ಮೊಡನೆ ಇಲ್ಲ ಈಸತ್ಯ ಒಪ್ಪಿ ಕೊಳ್ಳ ಬೇಕಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸಿ ಕೊಳ್ಳುವ ಶಕ್ತಿ ಅವರ ಪತ್ನಿಗೆ ಮುದ್ದಿನ ಮಗಳು ಸಮುಧ್ಯತಾ, ಮಗ ಶ್ರೀಕೃಷ್ಣ ಮತ್ತು ತಮ್ಮದಿಂದಿರಿಗೆ.ತಂಗಿಗೆ ಬರಲಿ ಎಂದು ಹಾರೈಸುತ್ತೇನೆ..
ಯಾವತ್ತೂ ಜೋಕು ಮಾಡಿ ಜತೆಗಿರುವರನ್ನು ನಗಿಸುತ್ತಿದ್ದ ಶ್ರೀಪತಿ ಜೋಕು ಮಾಡುವಾಗ ತನ್ನನ್ನು ತಾನು ಜೋಕಿಗೆ ಒಳಪಡಿಸುವುದು ಜಾಸ್ತಿ..ಅಂತಹಾ ಒಂದು ಜೋಕಿನೊಂದಿಗೆ ನನ್ನ ನುಡಿ ನಮನವನ್ನು ಮುಗಿಸುತ್ತೇನೆ.



No comments:

Post a Comment